ಇತರೆ ತರಬೇತಿಗಳು

  • Print
ಕರ್ನಾಟಕ ರಾಜ್ಯ ಸರ್ಕಾರದ ಒಂದು ಪ್ರಾಯೋಜಿತ ಯೋಜನೆಯಾದ ಸ್ವಾವಲಂಭನ ಯೋಜನೆಯಡಿ ಗ್ರಾಮೀಣ ಯುವಜನರಿಗಾಗಿ ಬೇಕರಿ, ಅಣಬೆ ಬೇಸಾಯ ಮತ್ತು ಸಸಿಮಡಿ ನಿರ್ವಹಣೆಯಲ್ಲಿ 12 ವಾರಗಳ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ವಿಸ್ತರಣಾ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತರಬೇತಿ ಘಟಕವು ಐ.ಎ.ಎಸ್. ಪ್ರೊಬೇಶನ್ ಅಧಿಕಾರಿಗಳಿಗೆ, ರಾಜ್ಯ ಸರ್ಕಾರದ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ ಇಲಾಖೆಗಳ ಅಧಿಕಾರಿಗಳಿಗೆ ನಿಯತವಾಗಿ ತರಬೇತಿ ಕೋರ್ಸ್ ಗಳನ್ನು ನಡೆಸುತ್ತಿದೆ. ವಿಶ್ವವಿದ್ಯಾನಿಲಯವು ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ತೊಡಗಿರುವ ತನ್ನದೇ ಸಿಬ್ಬಂದಿಗೆ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಇತ್ತೀಚಿನ ತಂತ್ರಜ್ಞಾನಗಳ ಹಾಗೂ ಸಾಧನೆಗಳ ಕುರಿತು ನಿರಂತರವಾಗಿ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಕೈಗೊಂಡಿದೆ.
  • ವಿಸ್ತರಣ ನಿರ್ದೇಶನಾಲಯದ ಇತರ ಘಟಕಗಳಾದ ರೈತ ತರಬೇತಿ ಸಂಸ್ಥೆ, ವಿಸ್ತರಣಾ ಘಟಕಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಒದಗಿಸುವಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿವೆ.
  • ಬೆಂಗಳೂರಿನ ಕೃಷಿ ಕಾಲೇಜಿನ ಇತರ ವಿಭಾಗಗಳು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ಸಿಬ್ಬಂದಿಗೆ ಬೇಸಿಗೆ ಶಾಲೆಗಳು/ಪುನರ್ಮನನ ಕೋರ್ಸ್ ಗಳನ್ನು ನಡೆಸುತ್ತಿವೆ.
Trainings