ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ವಿಭಾಗದಲ್ಲಿ ಸ್ನಾತಕ ಪದವಿಗಾಗಿ ೫ ಕೋರ್ಸ್ಗಳು ಮತ್ತು ಸ್ನಾತಕೋತ್ತರ ಕಾರ್ಯಕ್ರಮದಲ್ಲಿ ೮ ಕೋರ್ಸ್ಗಳು ಹಾಗೂ ೨ ಸೆಮಿನಾರ್ಗಳು ಮತ್ತು ಡಿಪ್ಲೊಮಾ (ಕೃಷಿ)ಗೆ ಬೋಧನಾ ಕೆಲಸವನ್ನು ನಿರ್ವಹಿಸಲಾಗುತ್ತಿದೆ. ಈ ವಿಭಾಗವು ೨೦೧೩ ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇಲ್ಲಿಯವರೆಗೆ ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ವಿಷಯದಲ್ಲಿ ೪೦ ವಿದ್ಯಾರ್ಥಿಗಳು ಎಂ.ಎಸ್ಸಿ (ಕೃಷಿ) ಪದವಿ ಪಡೆದಿರುತ್ತಾರೆ. ಇದಲ್ಲದೆ ವಿಭಾಗದ ಅಧ್ಯಾಪಕರು ವಿವಿಧರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಬೆಳೆಗಳಲ್ಲಿ ತಳಿಗಳ ಮತ್ತು ಹೈಬ್ರಿಡ್ಗಳ ಉದಾ: ಭತ್ತ, ಮೆಕ್ಕೆಜೋಳ, ಮೇವಿನ ಜೋಳ ಮತ್ತು ರಾಗಿಯಲ್ಲಿ ಅಭಿವೃದ್ಧಿಗೆ ಉತ್ತಮ ಕಾರ್ಯನಿರ್ವಹಿಸಿರುತ್ತಾರೆ.
ಶಿಕ್ಷಕರು

Designation: Assistant Professor
ಬೆಳೆ ಶರೀರ ಕ್ರಿಯಾಶಾಸ್ತ್ರ ವಿಭಾಗ
ವಿಭಾಗದ ವಿವರ: ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯದಲ್ಲಿನ ಬೆಳೆ ಶರೀರಕ್ರಿಯಾಶಾಸ್ತ್ರ ವಿಭಾಗವು ಸ್ನಾತಕ, ಸ್ನಾತಕೋತ್ತರ ಮತ್ತು ಡಿಪ್ಲೊಮಾ (ಕೃಷಿ) ಕೋರ್ಸ್ಗಳಿಗೆ ಬೋಧನೆಯನ್ನು ಮಾಡುತ್ತಿದೆ. ಸಸ್ಯಗಳಲ್ಲಿ ನೀರಿನ ನಿರ್ವಹಣೆ, ಬಾಷ್ಪ ವಿಸರ್ಜನೆ, ದ್ಯುತಿ ಸಂಶ್ಲೇಷಣೆಕ್ರಿಯೆ, ಉಸಿರಾಟ, ಬೆಳವಣಿಗೆ ಮತ್ತು ಅಭಿವೃದ್ಧಿ ಮತ್ತು ಸಸ್ಯ ಪೋಷಣೆ ಹಾಗೂ ಇನ್ನಿತರ ಸಸ್ಯ ಶರೀರಶಾಸ್ತ್ರದ ಮೂಲಭೂತ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಶಿಕ್ಷಕರು

ಹುದ್ದೆ: ಪ್ರಾಧ್ಯಾಪಕರು, ಬೆಳೆ ಶರೀರ ಕ್ರಿಯಾಶಾಸ್ತç
ವಿಶೇಷತೆ: ಬೆಳೆ ಶರೀರ ಕ್ರಿಯಾಶಾಸ್ತç
ಕೆಲಸದ ಅನುಭವ : ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕ್ಷೇತ್ರದಲ್ಲಿ ಇಪ್ಪತ್ತೊಂಬತ್ತು ವರ್ಷಗಳ
ಅನುಭವ. ಹದಿಮೂರು ವರ್ಷಗಳ ಕಾಲ ಮೂಡಿಗೆರೆಯ ವಲಯ ಸಂಶೋಧನಾ ಕೇಂದ್ರದಲ್ಲಿ ಕಿರಿಯ
ವಿಜ್ಞಾನಿಯಾಗಿ ಮತ್ತು ಹಾಸನದ ಕೃಷಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಹಾಗೂ ಪ್ರಸ್ತುತ
ಮಂಡ್ಯದ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದಲ್ಲಿ ಬೆಳೆ ಶರೀರಶಾಸ್ತçದ ಪ್ರಾಧ್ಯಾಪಕರು ಮತ್ತು
ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಲಯ ಕೃಷಿ ಸಂಶೋಧನಾ ಕೇಂದ್ರ, ಮೂಡಿಗೆರೆಯಲ್ಲಿ ಭತ್ತದ
ವಿಭಾಗದಲ್ಲಿ ತಳಿ ವಿಜ್ಞಾನಿಗಳ ಜೊತೆ ಕೆಲಸ ನಿರ್ವಹಿಸಿ ಮಲೆನಾಡು ಪ್ರದೇಶಕ್ಕೆ ಸೂಕ್ತವಾದಂತಹ ಎರಡು
ಭತ್ತದ ತಳಿಗಳಾದ ಕೆಹೆಚ್ಪಿ-೧೧ ಮತ್ತು ಕೆಹೆಚ್ಪಿ-೧೨ ರ ಬಿಡುಗಡೆಗೆ ಸಹಕರಿಸಿರುತ್ತಾರೆ. ಇದಲ್ಲದೆ ೧.
ಏಲಕ್ಕಿ ಬೆಳೆಯಲ್ಲಿ ಬರ ನಿರ್ವಹಣಾ ತಾಂತ್ರಿಕತೆಗಳು, ೨. ಪ್ಲಾಂಟೇಷನ್ ಬೆಳೆಗಳಲ್ಲಿ ಕಳೆ ನಿರ್ವಹಣೆ, ೩.
ಕಾಫಿ ಬೆಳೆಯಲ್ಲಿ ಹಣ್ಣಾಗಿಸುವ ತಾಂತ್ರಿಕತೆಗಳು, ಇವುಗಳ ಕುರಿತು ಕೆಲಸ ನಿರ್ವಹಿಸಿರುತ್ತಾರೆ.
+91-9448870810
ಬೀಜ ವಿಜ್ಞಾನ ಮತ್ತುತಾಂತ್ರಿಕತೆ ವಿಭಾಗ
ಬೀಜ ವಿಜ್ಞಾನ ಮತ್ತುತಾಂತ್ರಿಕತೆ ವಿಭಾಗದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತುಡಿಪ್ಲೊಮಾ (ಕೃಷಿ) ಕೋರ್ಸ್ಗಳನ್ನು ಬೋಧನೆ ಮಾಡಲಾಗುತ್ತಿದೆ. ಬೀಜೋತ್ಪಾದನೆ ತತ್ವಗಳು, ಬೀಜ ಸಂಸ್ಕರಣೆ, ಬೀಜ ಪ್ರಮಾಣೀಕರಣ, ಬೀಜ ಪರೀಕ್ಷೆ ಮತ್ತು ಬೀಜ ಶಾಸನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಶಿಕ್ಷಕರು

ವಿದ್ಯಾರ್ಹತೆ : ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ
ವಿಶೇಷತೆ: ಬೀಜ ವಿಜ್ಞಾನ ಮತ್ತುತಾಂತ್ರಿಕತೆ
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ: ಮಾರ್ಚ್ 19, 2025
- ಸೈಟ್ ಅಂಕಿಅಂಶಗಳು