Title Image

Blog

IIRF 2026 UAS Bangalore Ranking

UAS Bangalore Ranked 7th in IIRF Ranking

ದೇಶದಲ್ಲಿಯೇ ಪ್ರತಿಷ್ಠಿತ ಐಐಆರ್‌ಎಫ್ ಶ್ರೇಯಾಂಕದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿಗೆ 7ನೇ ಸ್ಥಾನ


ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ವ್ಯವಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಷನಲ್ ಶ್ರೇಯಾಂಕ ಫ್ರೇಮ್‌ವರ್ಕ್ (IIRF) – 2026ರ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ದೇಶದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಸಾಲಿನಲ್ಲಿ 7ನೇ ಸ್ಥಾನ ಪಡೆದು ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಇದರೊಂದಿಗೆ, ಕರ್ನಾಟಕ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿಯೇ ಯುಎಎಸ್ ಬೆಂಗಳೂರು ಅಗ್ರಸ್ಥಾನವನ್ನು ಸತತವಾಗಿ ಕಾಯ್ದುಕೊಂಡಿದೆ.

ಇಂಡಿಯನ್ ಇನ್‌ಸ್ಟಿಟ್ಯೂಷನಲ್ ಶ್ರೇಯಾಂಕ ಫ್ರೇಮ್‌ವರ್ಕ್ (IIRF) ದೇಶದಾದ್ಯಂತ 5,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡುವ, ರಾಷ್ಟ್ರೀಯ ಮಟ್ಟದ ಶ್ರೇಯಾಂಕ ನೀಡುವ ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು ಮತ್ತು ನಿರ್ವಹಣಾ ಸಂಸ್ಥೆಗಳನ್ನು ವೈಜ್ಞಾನಿಕವಾಗಿ ಅವಲೋಕಿಸಿ, ಸಂಶೋಧನಾ ಸಾಧನೆ, ಬೋಧಕ ಸಿಬ್ಬಂದಿಯ ಗುಣಮಟ್ಟ, ಉದ್ಯೋಗಾವಕಾಶಗಳು, ಉದ್ಯಮಗಳೊಂದಿಗೆ ಸಹಭಾಗಿತ್ವ, ನವೋದ್ಯಮ ಪ್ರೋತ್ಸಾಹ ಚಟುವಟಿಕೆಗಳು ಹಾಗೂ ಇತರೆ ಪ್ರಮುಖ ಮಾನದಂಡಗಳ ಆಧಾರದ ಮೇಲೆ ಈ ಮೌಲ್ಯಮಾಪನ ಮಾಡಲಾಗುತ್ತದೆ.

ಕಳೆದಬಾರಿ ವಿಶ್ವವಿದ್ಯಾನಿಲಯಕ್ಕೆ
ದೊರೆತಿದ್ದ ನ್ಯಾಕ್A+ ಶ್ರೇಯಾಂಕದ ಮುಂದುವರೆದ ಭಾಗವಾಗಿರುವ ಈ ಹಿರಿಮೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗುಣಮಟ್ಟದ ಶಿಕ್ಷಣ, ಉತ್ಕೃಷ್ಟ ಸಂಶೋಧನೆ, ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿ, ರೈತಪರ ವಿಸ್ತರಣಾ ಸೇವೆಗಳು ಹಾಗೂ ಸಮಾಜಮುಖಿ ಕಾರ್ಯಯೋಜನೆಗಳಿಗೆ ದೊರೆತಿರುವ ರಾಷ್ಟ್ರೀಯ ಮಟ್ಟದ ಮಾನ್ಯತೆಯಾಗಿದೆ.

ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ರೈತ ಸಮುದಾಯದ ಸಹಕಾರ ಮತ್ತು ಸಮರ್ಪಿತ ಸೇವೆಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ ಎಸ್ ವಿ ಸುರೇಶ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವ ಸಂಕಲ್ಪದೊಂದಿಗೆ ವಿಶ್ವವಿದ್ಯಾಲಯ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ಮುಂದುವರಿಸಲಿದೆ ಎಂದು ತಿಳಿಸಿದರು.


Message from Vice-Chancellor

No Comment

0

Post A Comment