ಪ್ರಮುಖ ಸಂಶೋಧನಾ ಫಲಿತಾಂಶಗಳು ೨೦೨೫-೨೬
- ಶ್ರೀಗಂಧದ ಎಲೆಯ ಸಾರವನ್ನು ಬಳಸಿಕೊಂಡು ಉತ್ತಮ ಜೈವಿಕ ಹೊಂದಾಣಿಕೆಯುಳ್ಳ ಮತ್ತು ಜೈವಿಕ ಸಕ್ರಿಯವುಳ್ಳ ಗುಣಮಟ್ಟದ ಪರಿಸರ ಸ್ನೇಹಿ ಜೈವಿಕ ಬೆಳ್ಳಿ ನ್ಯಾನೊಕಣಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದರ ಬಳಕೆಯಿಂದ ನೆಲಗಡಲೆ ಮತ್ತು ಅಲಸಂದೆ ಬೆಳೆಗಳಲ್ಲಿ ಕ್ರಮವಾಗಿ ೨೨% ಮತ್ತು ೨೫% ಅಧಿಕ ಇಳುವರಿಯನ್ನು ಗಳಿಸಲಾಗಿದೆ.
- ಭತ್ತದ ಧಾನ್ಯ ಬಣ್ಣ ಬದಲಾವಣೆ ಕಾಯಿಲೆಗೆ ಸಂಬಂಧಿಸಿದ ಹತ್ತು ಹೊಸ ರೋಗಕಾರಕಗಳನ್ನು (Pathogens) ಗುರುತಿಸಲಾಗಿದೆ ಈ ಸಂಶೋಧನೆಯು ರೋಗದ ಕಾರಣಶಾಸ್ತ್ರ‍್ರದ (Etiology of disease) ತಿಳುವಳಿಕೆಯನ್ನು ವಿಸ್ತರಿಸುತ್ತದೆ ಮತ್ತು ಉದ್ದೇಶಿತ ರೋಗ ನಿರ್ವಹಣಾ ತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿರುತ್ತದೆ.
- ವಿಶ್ವವಿದ್ಯಾನಿಲಯವು ೨೦೧೭ರಲ್ಲಿ ವಲಯ–೪, ವಲಯ–೫ ಮತ್ತು ವಲಯ–೬ರ ಪುನರ್ ವಿಂಗಡಣೆಯನ್ನು ವಲಯ–೫ ಮತ್ತು ವಲಯ–೬ರ ಸ್ಥಿತಿ ವರದಿಯಲ್ಲಿ ಪ್ರಕಟಿಸಲಾಗಿತ್ತು. ಇದೀಗ ಸರ್ಕಾರವು ಇದೇ ಕಾರ್ಯವನ್ನು ಕರ್ನಾಟಕದ ಎಲ್ಲಾ ೧೦ ಕೃಷಿ-ಹವಾಮಾನ ವಲಯಗಳಿಗೆ ವಿಸ್ತರಿಸಲು ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಿದೆ.
- ವಿಶ್ವವಿದ್ಯಾನಿಲಯದ ವತಿಯಿಂದ ೨೦೧೭ ಮತ್ತು ೨೦೨೪ರಲ್ಲಿ ಮಾದರಿ ಸಮಗ್ರ ಕೃಷಿ ವ್ಯವಸ್ಥೆಗಳನ್ನು ಶಿಫಾರಸ್ಸು ಮಾಡಲಾಗಿತ್ತು. ೨೦೨೫–೨೬ರ ರಾಜ್ಯ ಬಜೆಟ್‌ನಲ್ಲಿ ಸರ್ಕಾರವು ಪ್ರತಿ ಕೃಷಿ-ಹವಾಮಾನ ವಲಯದ ಎಲ್ಲಾ ಜಿಲ್ಲೆಗಳಿಗೂ ಸಮಗ್ರ ಕೃಷಿ ವ್ಯವಸ್ಥೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲು ನಿಧಿ ಮೀಸಲಿಟ್ಟಿz
- ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿ ಗ್ರಾಮ, ಮಾಗಡಿ ತಾಲ್ಲೂಕಿನ ಕೂತನಗೆರೆ ಗ್ರಾಮ ಹಾಗೂ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮಗಳಲ್ಲಿ ವಿಶ್ವವಿದ್ಯಾನಿಲಯವು ಸ್ಥಾಪಿಸದ ಕೃಷಿ ಸಂಸ್ಕರಣಾ ಕೇಂದ್ರಗಳ ಮಾದರಿಯಂತೆ ರಾಜ್ಯದಲ್ಲಿ ೫೦೦೦ ಕೃಷಿ ಸಂಸ್ಕರಣಾ ಕೇಂದ್ರಗಳನ್ನು (APC) ಸ್ಥಾಪಿಸುವ ಯೋಜನೆಯನ್ನು ಸರ್ಕಾರವು ಘೋಷಿಸಿದೆ
ಬಿಡುಗಡೆ ಮಾಡಲಾದ ನೂತನ ತಳಿಗ¼
- ೨೦೨೫-೨೬ರಲ್ಲಿ ಧಾನ್ಯ ಜೋಳ (ಸಿಎನ್‌ಜಿಎಸ್-೧), ಕಪ್ಪು ಅರಿಶಿಣ (ಸಿಹೆಚ್‌ಎನ್‌ಬಿಟಿ – ೧) ಮತ್ತು ಅರಿಶಿಣ (ಐಐಎಸ್‌ಆರ್ ಪ್ರತಿಭಾ) ಬೆಳೆಯಲ್ಲಿ ತಲಾ ಒಂದರAತೆ ಮೂರು ಅಧಿಕ ಇಳುವರಿ ನೀಡುವ ತಳಿಗಳು ಹಾಗೂ ಸೂರ್ಯಕಾಂತಿ (ಕೆಬಿಎಸ್‌ಹೆಚ್-೮೮) ಮತ್ತು ಹರಳು (ಬಿಸಿಹೆಚ್-೧೬೨) ಬೆಳೆಯಲ್ಲಿ ತಲಾ ಒಂದರAತೆ ಎರಡು ಸಂಕರಣ ತಳಿಗಳನ್ನು ವಿವಿಧ ವಲಯಗಳಿಗೆ ಬಿಡುಗಡೆ ಮಾಡಲಾಗಿದೆ. ರಾಜ್ಯ ತಳಿ ಬಿಡುಗಡೆ ಸಮಿತಿಯು ಈ ಎಲ್ಲಾ ೫ ತಳಿಗಳನ್ನು ದಿನಾಂಕ ೧೩.೦೧.೨೬ ರಂದು ಕೇಂದ್ರ ತಳಿ ಬಿಡುಗಡೆ ಸಮಿತಿ ಸಭೆಯಲ್ಲಿ ಮಂಡಿಸಲು ಒಪ್ಪಿಕೊಂಡಿz
ಭಾರತ ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ನೋಂದಾಯಿಸಲಾದ ತಳಿಗಳು
- ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಭಿವೃದ್ಧಿಪಡಿಸಿರುವ ೪ ತಳಿಗಳನ್ನು [ಸಂಕರಣ ಮುಸುಕಿನ ಜೋಳ (ಎಂಎಹೆಚ್-೧೫-೮೪), ಸಂಕರಣ ಸೂರ್ಯಕಾಂತಿ (ಕೆಬಿಎಸ್‌ಹೆಚ್-೯೦), ಹುಚ್ಚೆಳ್ಳು (ಕೆಬಿಎನ್-೨), ಮತ್ತು ಅಲಸಂದೆ (ಕೆಬಿಸಿ-೧೨)] ೧೩.೦೫.೨೦೨೫ರಂದು ಹೊರಡಿಸಿದ ಭಾರತ ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದ್ದು, ಪ್ರಸ್ತುತ ವರ್ಷದಿಂದ ಈ ತಳಿಗಳ ಬೀಜೋತ್ಪಾದನೆಯನ್ನು ಮಾಡಲಾಗುವುದು.
ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರಿಸಲು ಅಭಿವೃದ್ಧಿಪಡಿಲಾದ ನೂತನ ತಾಂತ್ರಿಕತೆಗಳು
- ವಿವಿಧ ಬೆಳೆಗಳ ಬೆಳೆಗಳಲ್ಲಿ, ೧೮ ಬೆಳೆ ಉತ್ಪಾದನೆ ಮತ್ತು ೮ ಬೆಳೆ ಸಂರಕ್ಷಣೆ ತಂತ್ರಜ್ಞಾನಗಳನ್ನು ಸೇರಿದಂತೆ ಒಟ್ಟಾರೆ ೨೬ ನೂತನ ತಾಂತ್ರಿಕತೆಗಳನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಯಲ್ಲಿ ಸೇರ್ಪಡೆಗೆ ಶಿಫಾರಸ್ಸು ಮಾಡಲಾಗಿದೆ
ವಾಣಿಜ್ಯೀಕರಣಕ್ಕಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳು
- ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿರುವ ೧ ಆಹಾರ ಆಧಾರಿತ ತಂತ್ರಜ್ಞಾನ, ೧ ಅಧಿಕ ಇಳುವರಿ ನೀಡುವ ತಳಿ ಮತ್ತು ೩ ಸಂಕರಣ ತಳಿಗಳನ್ನು ಉತ್ಪಾದಿಸಿ ವಾಣಿಜ್ಯಾಕರಣ ಮಾಡಲು ೮ ವಿವಿಧ ಸಂಸೆಗಳಿಗೆ ಲೈಸೆನ್ಸಲೈಸೆನ್ಸ ನೀಡಲಾಗಿದ್ದು, ಒಟ್ಟಾರೆಯಾಗಿ ೮ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು ರೂ. ೩೦.೫ ಲಕ್ಷ ಅನುಧಾನಗಳಿಸಲಾಗಿದೆ
ನವೀನ ಸಂಶೋಧನಾ ಯೋಜನೆಗಳು
- ೨೦೨೫-೨೬ರ ಸಾಲಿನಲ್ಲಿ ೪೧ ಹೊಸ ಪ್ರಾಯೋಜನೆಗಳು ಮಂಜೂರಾಗಿದ್ದು [೬ ಭಾರತ ಸರ್ಕಾರದ ಪ್ರಾಯೋಜನೆಗಳು, ೧೦ ಕರ್ನಾಟಕ ಸರ್ಕಾರದ ಪ್ರಾಯೋಜನೆಗಳು; ೫ ರಾಷ್ಟ್ರೀಯ ಕೃಷಿ ವಿಜ್ಞಾನ ಯೊಜನೆಯ ಪ್ರಾಯೋಜನೆಗಳು; ೮ ತತ್ಪೂರಿತ ಪ್ರಾಯೋಜನೆಗಳು; ೧೨ ಇತರೆ ಏಜೆನ್ಸಿಗಳ ಅನುದಾನದ ಪ್ರಾಯೋಜನೆಗಳು] ಅದರ ಮೊತ್ತ ರೂ. ೨೭೦೯.೫೮ ಲಕ್ಷಗಳು. ಇದರ ಜೊತೆಗೆ ಕೃ.ವಿ.ವಿ.ಯು ಸ್ಥಾನಿಕ ಸಮಸ್ಯೆಗಳ ಕುರಿತ ೨ ಸಂಶೋಧನಾ ಪ್ರಾಯೋಜನೆಗಳಿಗೆ ರೂ. ೪.೫ ಲಕ್ಷಗಳ ಅನುದಾನವನ್ನು ನೀಡಲಾಗಿದೆ.
ಇತರೆ ಸಂಸ್ಥೆಗಳ ಜೊತೆ ಮಾಡಿಕೊಂಡ ಒಡಂಬಡಿಕೆಗಳು / ಒಪ್ಪಂದಗಳು
- ಸಹಯೋಜಿತ ಸಂಶೋಧನಾ ಕಾರ್ಯಕ್ರಮಗಳನ್ನು ಪರಸ್ಪರ ಆಸಕಿಂದ ಕೈಗೊಳ್ಳಲು ವಿವಿಧ ಸಂಸ್ಥೆ ಒಟ್ಟು ೩೯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ
ಪರೀಕ್ಷಿಸಲಾದ ಹೊಸ ರಾಸಾಯನಿಕಗಳು / ತಳಿಗಳು / ಅಣುಗಳು
- ವಿಶ್ವವಿದ್ಯಾನಿಲಯವು ೭೧೨ ಹೊಸ ತಳಿಗಳು / ಪ್ರಭೇದಗಳು / ರಾಸಾಯನಿಕಗಳು / ಅಣುಗಳನ್ನು ಪೀಡೆ / ರೋಗ / ಕಳೆ ನಿಯಂತ್ರಣಕ್ಕಾಗಿ / ಮಣ್ಣು ವಿಶ್ಲೇಷಣೆಗಾಗಿ ಹಾಗೂ ಕೃಷಿ ಉಪಕರಣಗಳನ್ನು ಪರೀಕ್ಷಿಸಿದ್ದು ಅವುಗಳಿಂದ ಒಟ್ಟು ರೂ. ೩೮೯.೩೯ ಲಕ್ಷ ಆದಾಯವನ್ನು ಗಳಿಸಿದೆ.
ಬೀಜೋತ್ಪಾದನೆ
- ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ತನ್ನ ರಾಷ್ಟ್ರೀಯ ಬೀಜ ಪ್ರಾಯೋಜನೆಯಡಿ ೧,೨೭೧ ಕ್ವಿಂಟಾಲ್ ತಳಿವರ್ಧಕ ಬೀಜವನ್ನು ಮತ್ತು ವಿವಿಧ ಬೆಳೆಗಳ ೮,೭೪೪ ಕ್ವಿಂಟಾಲ್ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಬಹುದೆಂದು ಅಂದಾಜಿಸಲಾಗಿದೆ.
ಬೆಳೆ ಸುಧಾರಣೆ
- ೩೭೦೦ ಅಲಸಂದೆ ಪ್ರಜನನದ್ರವ್ಯಗಳಲ್ಲಿ, ವಿಶ್ವದಲ್ಲೇ ಮೊದಲ ಬಾರಿಗೆ ಐಸಿ ೨೬೩೦೧೫ ಮತ್ತು ಐಸಿ ೭೩೮೨೬೦ ಪ್ರಜನನದ್ರವ್ಯಗಳನ್ನು ದ್ಯುತಿ ಹಾಗೂ ಉಷ್ಣತಾ ಸಂವೇದನಾರಹಿತ ಪ್ರಜನನದ್ರವ್ಯಗಳಾಗಿ ವಿಶ್ವವಿದ್ಯಾಲಯವು ಗುರುತಿಸಿದೆ. ಐಸಿ೨೬೩೦೧೫ ಪ್ರಜನನದ್ರವ್ಯವನ್ನು ೨೬ ಡಿಸೆಂಬರ್ ೨೦೨೫ ರಂದು ರಾಷ್ಟ್ರೀಯ ಸಸ್ಯ ಜನನತಾಂತ್ರಿಕ ಸಂಪನ್ಮೂಲಗಳ ಕಚೇರಿಯ ಮೂಲತಳಿಯಲ್ಲಿ ನೋಂದಾಯಿಸಲಾಗಿದೆ. ಐಸಿ೭೩೮೨೬೦ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿz.
- ಬೆಂಗಳೂರು ಕೇಂದ್ರದಿಂದ ಅಭಿವೃದ್ಧಿಪಡಿಸಲಾದ ಸೋಯಾಅವರೆ ತಳಿ ಕೆಬಿಎಸ್‌ಎಲ್-೨೫ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಮುಂಗಡ ತಳಿ ಪ್ರಯೋಗಗಳಲ್ಲಿ ಪರೀಕ್ಷಿಸಲು ಶಿಫಾರಸ್ಸು ಮಾಡಲಾಗಿದೆ.
- ಸೂರ್ಯಕಾಂತಿಯ ಸಂಕರಣ ತಳಿಯಾದ ಕೆಬಿಎಸ್‌ಹೆಚ್-೯೧ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗಾಗಿ ಕೇಂದ್ರ ತಳಿ ಬಿಡುಗಡೆ ಸಮಿತಿಯಲ್ಲಿ ಮಂಡಿಸಲು ಶಿಫಾರಸ್ಸು ಮಾಡಲಾಗಿದೆ
ಬೆಳೆ ಉತ್ಪಾದನೆ
- ತೊಗರಿಕಾಯಿ ಉತ್ಪಾದಕತೆಯ ಮೇಲೆ ಭವಿಷ್ಯದ ಹವಾಮಾನ ಪರಿಣಾಮಗಳ ಯಂತ್ರ ಕಲಿಕೆ ಆಧಾರಿತ ಮೌಲ್ಯಮಾಪನದಲ್ಲಿ ಹತ್ತಿರದ (೨೦೨೫-೨೦೪೦), ಮಧ್ಯ (೨೦೪೧-೨೦೭೦) ಮತ್ತು ದೂರದ (೨೦೭೧-೨೧೦೦) ಅವಧಿಗಳಿಗೆ ಇಳುವರಿ ಮುನ್ಸೂಚನೆಗಳನ್ನು ರಚಿಸಲಾಗಿದ್ದು, ಬಿಆರ್‌ಜಿ-೧ (ಜುಲೈ) ಮತ್ತು ಟಿಟಿಬಿ-೭ (ಜೂನ್) ಹವಾಮಾನ ಬದಲಾವಣೆಗೆ ಹೆಚ್ಚಿನ ಹೊಂದಾಣಿಕೆಯ ಭರವಸೆಯನ್ನು ಮತ್ತು ಸ್ಥಿರವಾದ ಇಳುವರಿಯನ್ನು ನೀಡುತ್ತದೆ.
- ರಾಗಿ ಮತ್ತು ತಗರಿ ಬೆಳೆಗಳಲ್ಲಿ ಪೋಷಕಾಂಶಗಳು ಹಾಗೂ ಬೆಳವಣಿಗೆ ನಿಯಂತ್ರಕಗಳ ಡ್ರೋನ್ ಆಧಾರಿತ ಸಿಂಪಡಣೆಯ ಕಾರ್ಯಾಚರಣಾ ಕ್ರಮಗಳನ್ನು ಪ್ರಮಾಣೀಕರಿಸಲಾಗಿದೆ.
- ನೂತನ ಸಸ್ಯನಾಶಕಗಳ ಆಧಾರಿತ ಕಳೆ ನಿಯಂತ್ರಣ ತಂತ್ರಜ್ಞಾನವನ್ನು ಗುರುತಿಸಲಾಗಿದ್ದು, ಫ್ಲೂಅಜಿಫಾಪ್-ಪಿ-ಬ್ಯೂಟೈಲ್, ಫೋಮೆಸಾಫೆನ್ ಮತ್ತು ಕ್ವಿಜಾಲೊಫೋಪ್-ಪಿ-ಇಥೈಲ್ ಗಳನ್ನು ಬಳಸಿ ಕಳೆ ನಿಯಂತ್ರಣ ಮಾಡುವ ವಿಧಾನವನ್ನು ರೈತರ ಹೊಲದಲ್ಲಿ ಪರೀಕ್ಷಿಸಲು ಅನುಮೋದನೆಗೊಂಡಿರುತ್ತz
- ರಿವಾರ್ಡ್ ಯೋಜನೆಯಲ್ಲಿ, ೧,೭೭,೭೬೦ ಭೂ ಸಂಪನ್ಮೂಲ ದಾಸ್ತಾನು ಕಾರ್ಡ್ಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲು ಆಯಾ ಜಿಲ್ಲೆಗಳಿಗೆ ಕಳುಹಿಸಲಾಗಿದೆ.
ಬೆಳೆ ಸಂರಕ್ಷಣೆ
- ಅಕ್ಕಿಯಲ್ಲಿ ಕವಚ ಕೊಳೆ ರೋಗಕಾರಕ Sarocladium oryzae ವನ್ನು ತ್ವರಿತವಾಗಿ ಗುರುತಿಸಲು ಸಂವೇದನಾಶೀಲ LAMP–CRISPR Cas12a ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ
- ಅಕ್ಕಿಯಲ್ಲಿ ಗ್ಲಿಸರಾಲ್ಡಿಹೈಡ್-೩-ಫಾಸ್ಫೇಟ್ ಡಿಹೈಡ್ರೋಜಿನೇಸ್ ಜೀನನ್ನು ಗುರುತಿಸಲು ಸಂಪೂರ್ಣ ಕಿಟ್ ಹಾಗೂ ಇನ್ ವಿಟ್ರೋ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಸ್ಯ ಅಣು ರೋಗನಿರ್ಣಯಕ್ಕಾಗಿ ದೃಢ, ವಿಶೇಷ ಹಾಗೂ ಅತ್ಯಂತ ಸಂವೇದನಾಶೀಲ ಆಂತರಿಕ ನಿಯಂತ್ರಣ ಪರಿಹಾರವನ್ನು ಒದಗಿಸುತ್ತದೆ.
- ಅಕ್ಕಿ, ಗೋಧಿ, ಸಜ್ಜೆ, ರಾಗಿ, ನವಣೆ ಹಾಗೂ ವಿವಿಧ ಇತರ ಹುಲ್ಲು ಬೆಳೆಗಳಲ್ಲಿ ಬ್ಲಾಸ್ಟ್ ರೋಗಕ್ಕೆ ಕಾರಣವಾಗುವ Magnaporthe oryzae ರೋಗಕಾರಕವನ್ನು ವೇಗವಾದ ಪತ್ತೆಹಚ್ಚಲು, ಅತ್ಯಂತ ಸಂವೇದನಾಶೀಲ ಮತ್ತು ನಿರ್ದಿಷ್ಟ ರಿಕಾಂಬಿನೇಸ್ ಪಾಲಿಮರೇಸ್ ಆಂಪ್ಲಿಫಿಕೇಶನ್ (RPA)–CRISPR Cas12a ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.
- ಕರ್ನಾಟಕ ರಾಜ್ಯದಲ್ಲಿ ಕಂಡುಬರುವ ಸಸ್ಯಾವಲಂಭಿ ನುಸಿಗಳ ಅಧ್ಯಯನದ ಭಾಗವಾಗಿ ರಾಜ್ಯದ ವಿವಿಧ ಸ್ಥಳಗಳಿಂದ ಸಸ್ಯ ಮಾದರಿಗಳನ್ನು ಸಂಗ್ರಹಿಸಿ ನುಸಿಗಳನ್ನು ವಿಶ್ಲೇಷಿಸಲಾಗಿ, ೮೯ ಅತಿಥೇಯ ಸಸ್ಯಗಳಿಗೆ ಸಂಬಧಿಸಿದತೆ ೨೫ ಸಸ್ಯಾಹಾರಿ ನುಸಿ ಪ್ರಭೇಧಗಳು ದಾಖಲಿಸಲಾಗಿದೆ. ೫ ಸಸ್ಯಾವಲಂಭಿ ನುಸಿ ಪ್ರಭೇಧಗಳಿಂದ ಸಂಗ್ರಹಿಸಿದ ಒಟ್ಟು ೭ ಡಿ.ಎನ್.ಎ. ಅನುಕ್ರಮಣಿಕೆಗಳನ್ನು ಎನ್‌ಸಿಬಿಐ-ಜೆನ್‌ಬ್ಯಾಂಕ್‌ಗೆ ಸಲ್ಲಿಸಲಾಗಿದೆ (೦೭ ಐಟಿಎಸ್೨).
ಕೃಷಿ ಎಂಜಿನಿಯರಿಂಗ್
- ೨೦೨೫-೨೬ರಲ್ಲಿ ಕೃಷಿ ಇಲಾಖೆಯ ಸಬ್ಸಿಡಿ ಯೋಜನೆಯ RFP ದಾಖಲೆಯಲ್ಲಿ ಬಹು-ಬೆಳೆ ಸಂಸ್ಕರಣಾ ಯಂತ್ರವನ್ನು ಸೇರಿಸಲಾಗಿದೆ.
- ದ್ವಿದಳ ಧಾನ್ಯಗಳ ಕಾಯಿಗಳಿಂದ ಕಾಳುಗಳನ್ನು ಬಿಡಿಸಲು ಸರ್ವೋಪಯೋಗಿ ಶೆಲ್ಲರ್ ಯಂತ್ರ ಹಾಗೂ (ವಿವಿಧ ಗಾತ್ರದ ಮುಸುಕಿನ ಜೋಳದ ತೆನೆಗಳಿಂದ ಬೀಜ ಬಿಡಿಸುವ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ
- ವಿವಿಧ ತಾಜಾ ಹಸಿರು ಬೀನ್ಸ್ಗಳಿಗೆ ಸ್ವಯಂಚಾಲಿತ ಸರ್ವೋಪಯೋಗಿ ಡಿಸೀಡರ್-ಕಮ್-ಡಿಸ್ಕಿನ್ನರ್ ಯಂತ್ರ, ಸ್ವಯಂಚಾಲಿತ ಸಂವೇದಕ ನಿರ್ವಹಣ ಹರಳಿನ ಒಕ್ಕಣೆ ಮಾಡುವ ಹಾಗೂ ಸಿಪ್ಪೆ ತೆಗೆಯುವ ಯಂತ್ರ, ಸಿರಿಧಾನ್ಯಗಳನ್ನು ಕಂಡೀಷನಿಗ್,, ಹುರಿಯುವುದು ಮತ್ತು ಪಾಪಿಂಗ್ ಮಾಡಲು ಸಬ್-ಬ್ಯಾರಿಕ್ ಪ್ರೊಸೆಸರ್ ಸಿರಿಧಾನ್ಯ ಆಧಾರಿತ ಕೋರಿ ರೊಟ್ಟಿ ತಯಾರಿಸುವ ಯಂತ್ರದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ
ಇತರೆ ಕೃಷಿ ಸಂಬಂಧಿತ ವಿಭಾಗಗಳು
- ತ್ಯಾಜ್ಯ ರೇಷ್ಮೆ ಗೂಡುಗಳಿಂದ ಸೆರಿಸಿನ್‌ನ್ನು ಹೊರತೆಗೆಯುವ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ. ಆಹಾರ ಪದಾರ್ಥಗಳಲ್ಲಿ ಸೆರಿಸಿನ್‌ನ ಬಳಕೆಯ ಕುರಿತು ಅಧ್ಯಯನಗಳು ಪ್ರಗತಿಯಲ್ಲಿವೆ.
- ಜೇನು ಕುಟುಂಬದ ಆರೋಗ್ಯವನ್ನು ಮೌಲ್ಯಮಾಪನ ಮಾಡಲು, ಒತ್ತಡ ಅಥವಾ ರೋಗವನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಲು ಮತ್ತು ತಕ್ಷಣದ ಎಚ್ಚರಿಕೆಗಳನ್ನು ನೀಡಲು ಗೂಡಿನ ತಾಪಮಾನ, ಆರ್ದ್ರತೆ, ತೂಕ ಹಾಗೂ ಧ್ವನಿಸೂಚನೆಗಳನ್ನು ನಿರಂತರವಾಗಿ ನಿಗಾವಹಿಸುವ ಕೃತಕ ಬುದ್ಧಿಮತ್ತೆ (AI) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸಕ್ರಿಯ ಸ್ಮಾರ್ಟ್ ಜೇನುಕೃಷಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ
- ಪಾರಂಪರಿಕ ಮತ್ತು ರಾಸಾಯನಿಕ ಪರೀಕ್ಷಾ ವಿಧಾನಗಳ ಮಿತಿಗಳನ್ನು ನಿವಾರಿಸಿ ಪ್ರಶಿಕ್ಷಿತ ಕೃತಕ ಬುದ್ಧಿಮತ್ತೆ ಆಧಾರಿತ ವಿಧಾನ, ಉಪಕರಣ ಮತ್ತು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ರೇಷ್ಮೆಯ ಗುಣಮಟ್ಟ ಹಾಗೂ ನೇಕಾರಿಕೆಯ ವಿಧಾನವನ್ನು ನಿಖರವಾಗಿ ವಿಶ್ಲೇಷಿಸಿ ಗುರುತಿಸುತ್ತದೆ
- ಮಹಿಳಾ ರೈತರ ಆಸಕ್ತಿ ಗುಂಪುಗಳನ್ನು ರಚಿಸಿ, ಬೆಳೆ ಆಧಾರಿತ ಉದ್ಯಮಗಳ ಕುರಿತು ಸಂಯೋಜಿತ ತರಬೇತಿಯನ್ನು ನೀಡಲಾಯಿತು. ಇದರ ಫಲವಾಗಿ ಸಿರಿಧಾನ್ಯಗಳ ಮತ್ತು ಹುಣಸೆ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ನಾಲ್ಕು FSSAI -ನೊಂದಾಯಿತ ಘಟಕಗಳನ್ನು ಸ್ಥಾಪಿಸಲಾಯಿತು. ಈ ಘಟಕಗಳು ಒಟ್ಟಾರೆ ತಿಂಗಳಿಗೆ ಸರಾಸರಿ ೩೦,೦೦೦ ಆದಾಯವನ್ನು ಉತ್ಪಾದಿಸುತ್ತಿದ್ದು, ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವುದರೊಂದಿಗೆ ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುತ್ತಿವೆ ಮತ್ತು ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ಮೌಲ್ಯವರ್ಧನೆಯನ್ನು ಹೆಚ್ಚಿಸುತ್ತಿವೆ.




