ಬೇಕರಿ ಒಂದು ಬೃಹತ್ ಉದ್ದಿಮೆಯಾಗಿ ಪ್ರಪಂಚದಾದ್ಯAತ ಶರವೇಗದಲ್ಲಿ ಬೆಳೆಯುತ್ತಿದ್ದು, ಸ್ವಯಂ ಉದ್ಯೋಗಾಕಂಕ್ಷಿಗಳಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಬೇಕರಿ ತರಬೇತಿ ಕೇಂದ್ರವು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದಲ್ಲಿ ೧೯೬೮ ರಲ್ಲಿ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಯು. ಎಸ್. ವೀಟ್. ಅಸೋಸೀಯೇಟ್ಸ್, ನವದೆಹಲಿಯವರು ಕೌಶಲ್ಯ ತರಬೇತಿಯನ್ನು ಉತ್ತೇಜಿಸುವ ಸಲುವಾಗಿ ಆರ್ಥಿಕ ನೆರವು ನೀಡುವುದರ ಮೂಲಕ ಯಂತ್ರೋಪಕರಣಗಳ ವ್ಯವಸ್ಥೆ ಕಲ್ಪಿಸಿತು. ಪ್ರಾರಂಭದಲ್ಲಿ ಮಹಿಳೆಯರಿಗಾಗಿ ಮೂರು ದಿನಗಳ ಬೇಕರಿ ತಿನಿಸುಗಳ ತಯಾರಿಕಾ ತರಬೇತಿ ಪ್ರಾರಂಭಿಸಿದ್ದು, ಕ್ರಮೇಣ ತಂತ್ರಜ್ಞಾನ ಆಧಾರಿತ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಂತರ ಈ ಸಂಸ್ಥೆಯು ಅವಶ್ಯತೆಗನುಸಾರವಾಗಿ ಯುವಕ ಹಾಗೂ ಯುವತಿಯರನ್ನು ಕೌಶಲ್ಯದಲ್ಲಿ ಸ್ವಾವಲಂಬಿಗಳಾಗಿಸಲು ಬೇಕಾದ ತಂತ್ರಜ್ಞಾನ ಆಧರಿಸಿ ಹಂತ ಹಂತವಾಗಿ ವಿವಿಧ ಕಾಲಾವಧಿಯ ತರಬೇತಿ ಕಾರ್ಯಕ್ರಮಗಳನ್ನು ಆಳವಡಿಸಿಕೊಳ್ಳುತ್ತಾ ಬಂದಿದೆ.ಪ್ರಯೋಗಾಲಯದಲ್ಲಿ ಬೇಕರಿ ಉತ್ಪನ್ನಗಳನ್ನು ಕೌಶಲ್ಯ ತರಬೇತಿಯ ಮೂಲಕವೇ ಸಾಮರ್ಥ್ಯ ಬಲವರ್ದನೆ ಮಾಡಲಾಗುತ್ತಿದೆ. ಇದರ ಮೂಲ ಉದ್ದೇಶವು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಉದ್ದಿಮೆಯ ಎಲ್ಲಾ ಹಂತದ ಅರಿವು ಮೂಡುವಂತೆ ಸಮರ್ಥವಾಗಿ ತಿಳಿಸಿಕೊಡುವುದು.
ಸ್ವಯಂ ಉದ್ದಿಮೆಯ ಆಕಾಂಕ್ಷಿಗಳ ಅವಶ್ಯಕತೆಗೆ ತಕ್ಕಂತೆ ಕೈಗಾರಿಕೋದ್ದಿಮಿಗಳು, ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಯೋಜನೆಗಳ ಮುಖಾಂತರವೂ, ವಿವಿಧ ಗುಂಪಿನ ಜನತೆಗೆ ತರಬೇತಿ ಒದಗಿಸುತ್ತಿದೆ. ಸ್ವಯಂ ಉದ್ಯೋಗ ಹಂಬಲಿಸಿದ ಯುವಕ/ಯುವತಿಯರು ಬೇಕರಿ ಕೈಗಾರಿಕೆಗಳಲ್ಲಿ ನೌಕರಿ ಪಡೆದಿದ್ದಾರೆ. ಇನ್ನು ಕೆಲವರು ಸ್ವಂತ ಉದ್ದಿಮೆ ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಭಾರತದೆಲ್ಲೆಡೆ ವಿವಿಧ ಕೇಂದ್ರಗಳಲ್ಲಿ/ವಿಶ್ವವಿದ್ಯಾನಿಲಯಗಳಲ್ಲಿ ತರಬೇತಿದಾರರಾಗಿದ್ದಾರೆ, ಪಾಶ್ಚಾತ್ಯ ದೇಶಗಳಲ್ಲಿನ ಕೈಗಾರಿಕೆಗಳಲ್ಲಿ, ಭಾರತೀಯ ನೌಕಾದಳ/ವಿಮಾನ/ಪಂಚತಾರ ಹೋಟೆಲ್ಗಳ ಬೇಕರಿ ಘಟಕಗಳಲ್ಲಿ ಸ್ಥಾನ ಗಳಿಸಿದ್ದಾರೆ. ಇತ್ತೀಚಿಗೆ “ಕ್ಯಾಂಪಸ್ ರೆಕ್ರೂಟ್ಮೆಂಟ್” ವ್ಯವಸ್ಥೆಯ ಮೂಲಕವೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಲಾಗುತ್ತಿದೆ. ಸರ್ಕಾರಿ ಯೋಜನೆಗಳಡಿ, ಯುವಕರ ಗುಂಪು, ಸ್ವಸಹಾಯ ಗುಂಪಿನ ಮಹಿಳೆಯರು; ಸ್ವಯಂ ನಿವೃತ್ತಿ ಪಡೆದಿರುವ ಪುರುಷ, ಮಹಿಳೆಯರಿಗೂ ಸ್ವಯಂ ಉದ್ಯೋಗಾಕಾಂಕ್ಷಿ ಎನ್.ಜಿ.ಒ ಮಹಿಳೆಯರು, ಸ್ಪಾಸ್ಟಿಕ್ ಸೊಸೈಟಿಯ ಸದಸ್ಯರು, ಹೀಗೆ ನಾನಾ ಗುಂಪಿನವರ ಅಗತ್ಯಕ್ಕನುಸಾರವಾಗಿ ತರಬೇತಿ ಪಠ್ಯ ಹಾಗೂ ಪ್ರಾಯೋಗಿಕ ಕೌಶಲ್ಯತೆಯನ್ನು ಮಾರ್ಪಡಿಸಿ ಸೌಲಭ್ಯ ಒದಗಿಸಲಾಗಿದೆ. ಇತರ ರಾಜ್ಯಗಳ ಕೈಗಾರಿಕೆ ಅಭಿವೃದ್ಧಿ ಕೇಂದ್ರಗಳ (ಅಸ್ಸಾಂ) ಆರ್ಥಿಕ ನೆರವಿನಿಂದ ಇತರ ರಾಜ್ಯದ ಯುವಕರಿಗೂ ಬೇಕರಿ ತರಬೇತಿ ಒದಗಿಸಲಾಗಿದೆ. ವಿವಿಧ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನತೆಯ ಸೌಕರ್ಯಕ್ಕಾಗಿ ಪ್ರಾತ್ಯಕ್ಷಿಕೆಗಳನ್ನೂ; ಬೇಕರಿ ತಿನಿಸುಗಳ ವಸ್ತು ಪ್ರದರ್ಶನ, ಸ್ಪರ್ಧೆಗಳನ್ನೂ ನೆರೆವೇರಿಸುವಲ್ಲಿ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ ನಿರಂತರವಾಗಿ ಭಾಗವಹಿಸುತ್ತದೆ.
೨೦೦೬ ರಿಂದ ಈಚೆಗೆ ಈ ಕೇಂದ್ರದ ಚಟುವಟಿಕೆಯಲ್ಲಿ ‘ಆಹಾರ ಮೌಲ್ಯವರ್ಧನೆ’ ಸೇರ್ಪಡೆಗೊಂಡಿದೆ. ‘ಆಹಾರ ಸಂಸ್ಕರಣೆ ’ ಸ್ವಯಂ ಉದ್ಯೋಗಿಗಳ ಗಮನ ಸೆಳೆದಿರುವುದನ್ನು ಗಮನದಲ್ಲಿಟ್ಟುಕೊಂಡು, ವಿಶ್ವವಿದ್ಯಾನಿಲಯವು “ಭಾರತ ಸರ್ಕಾರ ಆಹಾರ ಸಂಸ್ಕರಣೆ ಮತ್ತು ಕೈಗಾರಿಕೆ ಸಚಿವಾಲಯ”, ಪ್ರಾಯೋಜಿತ ಯೋಜನೆಯ ಆರ್ಥಿಕ ಸಹಾಯದಲ್ಲಿ “ಫುಡ್ ಪ್ರೊಸೆಸಿಂಗ್ ಮತ್ತು ಟ್ರೆöÊನಿಂಗ್ ಸೆಂಟರ್’ ವಿಭಾಗವನ್ನೂ ಈ ಕೇಂದ್ರದಲ್ಲಿ ಪ್ರಾರಂಭಿಸಿದೆ.ಈ ಕೇಂದ್ರವು ಆಹಾರ ತಂತ್ರಜ್ಞಾನ ಸಂಶೋಧನೆಯ ನಿಟ್ಟಿನಲ್ಲಿಯೂ ನಿರಂತರವಾಗಿ ಕೈಜೋಡಿಸಿ ತರಬೇತಿಯನ್ನು ನೀಡುತ್ತಿದೆ. ಇದರಲ್ಲಿ ಧಾನ್ಯಗಳ ಸಂಸ್ಕರಣೆ; ಹಣ್ಣು ತರಕಾರಿಗಳ ಸಂಸ್ಕರಣೆ; ಸೋಯಾ ಅವರೆ ಸಂಸ್ಕರಣೆ; ಹೀಗೆ ಸಂಸ್ಕರಿಸಿ, ಶೇಖರಿಸಿ “ಆಹಾರ ಸಂಸ್ಕರu ೆ’ ಯ ಉದ್ದಿಮೆ ಹಮ್ಮಿಕೊಳ್ಳಲು ಆಶಿಸುವವರಿಗೆ ತರಬೇತಿ ಒದಗಿಸಲಾರಂಭಿಸಿದೆ. ರಾಗಿ ಆಧಾರಿತ ತಿನಿಸುಗಳ ತಯಾರಿಕೆ, ಮುಸುಕಿನ ಜೋಳದ ತಿನಿಸುಗಳು, ಸಾಂಬಾರ ಪದಾರ್ಥಗಳ ಮಿಶ್ರಣ ತಯಾರಿಕೆ ತರಬೇತಿ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
ಈ ಎಲ್ಲಾ ಚಟುವಟಿಕೆಗಳನ್ನು ಪರಿಶೀಲಿಸಿ “ಆಹಾರ ಸಂಸ್ಕರಣೆ ಮತ್ತು ಕೈಗಾರಿಕೆ ಸಚಿವಾಲಯ” ಭಾರತ ಸರ್ಕಾರವು, ಮಾರ್ಚ್ ೨೦೦೮ ರಲ್ಲಿ ಈ ತರಬೇತಿ ಕೇಂದ್ರಕ್ಕೆ “ರಾಷ್ಟಿಯ ಉತ್ಪಾದನಾ ಪರಿಷತ್ನ ಪ್ರಶಸ್ತಿ” ನೀಡಿ ಗೌರವಿಸಿದ
-
- ಪುಟ ಸಂದರ್ಶಕರ ಸಂಖ್ಯೆ:
- ಕೊನೆಯದಾಗಿ ನವೀಕರಿಸಲಾಗಿದೆ:
- ಸೈಟ್ ಅಂಕಿಅಂಶಗಳು


