ಸ್ನಾತಕೋತ್ತರ ಪದವಿ ಕೋರ್ಸ್ ಗಳು

 
Dr. K. C. Narayanaswamy
Dean (Post Graduate Studies)
University Of Agricultural Sciences
GKVK Bangalore-560 065
+91-80-23330422 (O)
+91-80-23330153 Extn.365
This email address is being protected from spambots. You need JavaScript enabled to view it.

bullet image

Registration Link

The PG students are informed to register for PG Science Week 2023 on or before 4.00 PM on 31/07/2023.

The registration link for PG Science Week 2023 is https://forms.gle/7e4NNcsmoXDESp8X8

The email ID for any queries on science week is This email address is being protected from spambots. You need JavaScript enabled to view it.


ಕೃಷಿಯಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡುವ ಉದ್ದೇಶದಿಂದ 1966ರಲ್ಲಿ ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶನಾಲಯವನ್ನು ಕೃವಿವಿ (ಬೆಂ) ಇಲ್ಲಿ ಆರಂಭಿಸಲಾಯಿತು. ವಿದ್ಯಾರ್ಥಿಗಳು ಒಟ್ಟಾರೆಯಾಗಿ ಈ ಪ್ರದೇಶದಲ್ಲಿ ಕೃಷಿ ಮತ್ತು ಗ್ರಾಮೀಣ ಸಮುದಾಯದ ಕೃಷಿ ಬೆಳವಣಿಗೆ ಮತ್ತು ಜೀವನೋಪಾಯದ ಬೆಂಬಲವನ್ನು ಹೆಚ್ಚಿಸಲು ಕಾರಣೀಭೂತರಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕೃಷಿ ಎಂದರೆ ಮಣ್ಣನ್ನು ಸಂರಕ್ಷಿಸುವುದು, ಬೆಳೆಗಳನ್ನು ಬೆಳೆಯುವುದು ಮತ್ತು ಜಾನುವಾರುಗಳನ್ನು ಬೆಳೆಸುವ ಕಲೆ ಮತ್ತು ವಿಜ್ಞಾನ. ಜನರ ಬಳಕೆಯ ಪ್ರಯುಕ್ತ ಸಸ್ಯ ಮತ್ತು ಪ್ರಾಣಿ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಮಾರುಕಟ್ಟೆಗಳಿಗೆ ಅವುಗಳ ವಿತರಣೆಯನ್ನು ಒಳಗೊಂಡಿದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿ 23 ವಿವಿಧ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅವುಗಳು ಕೃಷಿ ಕೀಟಶಾಸ್ತ್ರ, ಕೃಷಿ ವಿಸ್ತರಣೆ, ಕೃಷಿ ಸೂಕ್ಷ್ಮಜೀವವಿಜ್ಞಾನ, ಸಸ್ಯ ರೋಗಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಕೃಷಿ ಅರ್ಥಶಾಸ್ತ್ರ, ತೋಟಗಾರಿಕೆ, ಬೇಸಾಯ ಶಾಸ್ತ್ರ, ಆನುವಂಶೀಯ ಮತ್ತು ಸಸ್ಯತಳಿ ಶಾಸ್ತ್ರ, ಬೆಳೆ ಶರೀರಶಾಸ್ತ್ರ, ಆಹಾರ ವಿಜ್ಞಾನ ಮತ್ತು ಪೋಷಣೆ, ಕೃಷಿ ಅಂಕಿ ಅಂಶ, ಸಸ್ಯ ಜೀವರಸಾಯನ ಶಾಸ್ತ್ರ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ, ರೇಷ್ಮೆ ಕೃಷಿ, ಕೃಷಿ ಮಾರಾಟ ಮತ್ತು ಸಹಕಾರ, ಸಸ್ಯ ಜೀವÀ ತಂತ್ರಜ್ಞಾನ, ಜೇನುಸಾಕಣೆ, ಪರಿಸರ ವಿಜ್ಞಾನ, ಕೃಷಿ ವ್ಯವಹಾರ ನಿರ್ವಹಣೆ ಮತ್ತು ಕೃಷಿ ಇಂಜಿನಿಯರಿಂಗ್‍ನಲ್ಲಿ - ಮಣ್ಣು ಮತ್ತು ಜಲ ಸಂರಕ್ಷಣಾ ಇಂಜಿನಿಯರಿಂಗ್ ಹಾಗೂ ಸಂಸ್ಕರಣೆÉ ಮತ್ತು ಆಹಾರ ಇಂಜನಿಯರಿಂಗ್. ಪ್ರಸ್ತುತ ಸಾಲಿನಿಂದ ಬಯೋ-ಇನ್ಫಾಮ್ರ್ಯಾಟಿಕ್ಸ್ ಕೂಡ ಅಂಭಿಸಿದೆ. ಸ್ನಾತಕೋತ್ತರ ಪದವೀಧರರಿಗೆ ಎರಡು ವರ್ಷದ ವಸತಿ ಅವಶ್ಯಕತೆಯೊಂದಿಗೆ, ನಾಲ್ಕು ವರ್ಷಗಳ ಪೂರ್ಣಗೊಳ್ಳುವ ಕಾಲದ ಮಿತಿ ಇರುತ್ತದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿ 16 ವಿವಿಧ ಪಿ.ಎಚ್.ಡಿ ಪದವಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೃಷಿ ಸೂಕ್ಷ್ಮಜೀವ ವಿಜ್ಞಾನ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ಕೃಷಿ ಕೀಟಶಾಸ್ತ್ರ, ಸಸ್ಯ ರೋಗಶಾಸ್ತ್ರ, ಕೃಷಿ ಅರ್ಥಶಾಸ್ತ್ರ, ಕೃಷಿ ವಿಸ್ತರಣೆ, ತೋಟಗಾರಿಕೆ, ಬೇಸಾಯ ಶಾಸ್ತ್ರ, ಆನುವಂಶೀಯ ಮತ್ತು ಸಸ್ಯತಳಿ ಶಾಸ್ತ್ರ, ಬೆಳೆ ಶರೀರಶಾಸ್ತ್ರ, ರೇಷ್ಮೆ ಕೃಷಿ, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ಪೋಷಣೆ, ಸಸ್ಯ ಜೀವÀ ತಂತ್ರಜ್ಞಾನ, ಅರಣ್ಯ ಮತ್ತು ಪರಿಸರ ವಿಜ್ಞಾನ ಮತ್ತು ಕೃಷಿ ವ್ಯವಹಾರ ನಿರ್ವಹಣೆ ಕಾರ್ಯರಂಭವಾಗಿರುತ್ತದೆ. ಡಾಕ್ಟರಲ್ ಪದವೀಧರರಿಗೆ ಮೂರು ವರ್ಷದ ವಸತಿ ಅವಶ್ಯಕತೆಯೊಂದಿಗೆ, ಆರು ವರ್ಷಗಳ ಪೂರ್ಣಗೊಳ್ಳುವ ಕಾಲದ ಮಿತಿ ಇರುತ್ತದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹೆಸರಾಂತ ಸಂಘಟನೆಯೊಂದಿಗೆ ಶೈಕ್ಷಣಿಕ ಪಾಲುದಾರರಾಗಿದ್ದು, ಕೃಷಿಯಲ್ಲಿನ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ತಮ್ಮ ಮುಂದಿನ ವೃತ್ತಿ ಜೀವನದಲ್ಲಿ ಮುಂದುವರೆಯಲು ಸಹಾಯವಾಗುವಂತೆ ರೂಪಿಸಲಾಗುತ್ತದೆ. ಈ ವಿಶ್ವವಿದ್ಯಾನಿಲಯದಿಂದ ಹೊರನಡೆಯುವ ಸ್ನಾತಕೋತ್ತರ ವಿದ್ಯಾರ್ಥಿಗಳು ರೈತರ ಜೀವನ ಮಟ್ಟದ ಸುಧಾರಣೆ ಮತ್ತು ಕೃಷಿಯ ಅಭಿವೃದ್ಧಿಗೆ ತಮ್ಮ ಪರಿಣತಿಯನ್ನು ಹೂಡಿಕೆ ಮಾಡುತ್ತಾರೆ ಎಂದು ಆಶಿಸುತ್ತೇವೆ. ಅಂತಿಮವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ನನ್ನ ಮನವಿ, ಇದು ವಿಶ್ವವಿದ್ಯಾನಿಲಯಕ್ಕೆ ಪ್ರಶಸ್ತಿಗಳನ್ನು ತರಲು ಅವಕಾಶವನ್ನು ನೀಡುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ್ನಾತಕೋತ್ತರ ಪದವಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಭವಿಷ್ಯದ ಉದಾತ್ತ ವೃತ್ತಿಯನ್ನು ಸವiರ್ಪಣೆ ಮತ್ತು ಹೆಮ್ಮೆಯಿಂದ ಪೂರೈಸುವಲ್ಲಿ ತಮ್ಮ ಮುಂದಿನ ಪ್ರಯತ್ನಗಳಲ್ಲಿ ಯಶಸ್ಸನ್ನು ಬಯಸುತ್ತೇವೆ.

ಸ್ನಾತಕೋತ್ತರ ಪದವಿ ಕಾರ್ಯಕ್ರಮ

ವಿಷಯ ಆರಂಭಿಕ ವರ್ಷ ಪದವಿ ಕಾರ್ಯಕ್ರಮ
ಕೃಷಿ ಕೀಟಶಾಸ್ತ್ರ* 1966-67 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಕೃಷಿ ವಿಸ್ತರಣೆ * 1966-67 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಕೃಷಿ ಸೂಕ್ಷ್ಮಜೀವವಿಜ್ಞಾನ 1966-67 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಸಸ್ಯ ರೋಗಶಾಸ್ತ್ರ* 1966-67 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ* 1966-67 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಕೃಷಿ ಅರ್ಥಶಾಸ್ತ್ರ * 1968-69 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ತೋಟಗಾರಿಕೆ 1971-72 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಬೇಸಾಯ ಶಾಸ್ತ್ರ* 1973-74 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಆನುವಂಶೀಯ ಮತ್ತು ಸಸ್ಯತಳಿ ಅಭಿವೃದ್ಧಿ* 1973-74 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಬೆಳೆ ಶರೀರ ಶಾಸ್ತ್ರ 1974-75 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಆಹಾರ ವಿಜ್ಞಾನ ಮತ್ತು ಪೋಷಣೆ 1975-76 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಕೃಷಿ ಅಂಕಿಅಂಶ 1975-76 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಸಸ್ಯ ಜೀವರಸಾಯನಶಾಸ್ತ್ರ 1976-77 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ 1976-77 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ರೇಷ್ಮೆ ಕೃಷಿ 1981-82 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಮಣ್ಣು ಮತ್ತು ಜಲ ಸಂರಕ್ಷಣಾ ಇಂಜಿನಿಯರಿಂಗ್ 1987-88 ಮಾಸ್ಟರ್ ಆಫ್ ಟೆಕ್ನಾಲಜಿ
(ಕೃಷಿ ಇಂಜಿನಿಯರಿಂಗ್)
ಸಂಸ್ಕರಣೆ ಮತ್ತು ಆಹಾರ ಇಂಜಿನಿಯರಿಂಗ್ 1989-90 ಮಾಸ್ಟರ್ ಆಫ್ ಟೆಕ್ನಾಲಜಿ
(ಕೃಷಿ ಇಂಜಿನಿಯರಿಂಗ್)
ಕೃಷಿ ಮಾರಾಟ ಮತ್ತು ಸಹಕಾರ * 1994-95 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಸಸ್ಯ ಜೀವ ತಂತ್ರಜ್ಞಾನ 1996-97 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಜೇನುಸಾಕಣೆ 1997-98 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಪರಿಸರ ವಿಜ್ಞಾನ 2007-08 ಮಾಸ್ಟರ್ ಆಪ್ ಸೈನ್ಸ್ (ಕೃಷಿ)
ಕೃಷಿ ವ್ಯವಹಾರ ನಿರ್ವಹಣೆ 2007-08 ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಎಬಿಎಂ)
ಬಯೋ-ಇನ್ಫಾಮ್ರ್ಯಾಟಿಕ್ಸ್ 2020-21 ಮಾಸ್ಟರ್ ಆಪ್ ಸೈನ್ಸ್ (ಕೃಷಿ)

*Offered at College of Agriculture, Mandya  

ಪಿ.ಎಚ್.ಡಿ. ಪದವಿ ಕಾರ್ಯಕ್ರಮ

The Doctoral degree programmes are offered in the faculty of Agriculture and Horticulture. The residential requirement for Ph.D. degree programme is 2 years.
ವಿಷಯ ಆರಂಭಿಕ ವರ್ಷ ಪದವಿ ಕಾರ್ಯಕ್ರಮ
ಕೃಷಿ ಸೂಕ್ಷ್ಮಜೀವವಿಜ್ಞಾನ 1966-67 ಡಾಕ್ಟರ್ ಆಫ್ ಫಿಲಾಸಪಿ
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ 1966-67 ಡಾಕ್ಟರ್ ಆಫ್ ಫಿಲಾಸಪಿ
ಕೃಷಿ ಕೀಟಶಾಸ್ತ್ರ 1969-70 ಡಾಕ್ಟರ್ ಆಫ್ ಫಿಲಾಸಪಿ
ಸಸ್ಯ ರೋಗಶಾಸ್ತ್ರ 1969-70 ಡಾಕ್ಟರ್ ಆಫ್ ಫಿಲಾಸಪಿ
ಕೃಷಿ ಅರ್ಥಶಾಸ್ತ್ರ 1974-75 ಡಾಕ್ಟರ್ ಆಫ್ ಫಿಲಾಸಪಿ
ಕೃಷಿ ವಿಸ್ತರಣೆ 1974-75 ಡಾಕ್ಟರ್ ಆಫ್ ಫಿಲಾಸಪಿ
ತೋಟಗಾರಿಕೆ 1974-75 ಡಾಕ್ಟರ್ ಆಫ್ ಫಿಲಾಸಪಿ
ಬೇಸಾಯ ಶಾಸ್ತ್ರ 1975-76 ಡಾಕ್ಟರ್ ಆಫ್ ಫಿಲಾಸಪಿ
ಆನುವಂಶೀಯ ಮತ್ತು ಸಸ್ಯತಳಿ ಶಾಸ್ತ್ರ 1974-76 ಡಾಕ್ಟರ್ ಆಫ್ ಫಿಲಾಸಪಿ
ಬೆಳೆ ಶರೀರ ಶಾಸ್ತ್ರ 1976-77 ಡಾಕ್ಟರ್ ಆಫ್ ಫಿಲಾಸಪಿ
ರೇಷ್ಮೆ ಕೃಷಿ 1986-87 ಡಾಕ್ಟರ್ ಆಫ್ ಫಿಲಾಸಪಿ
ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ 1987-88 ಡಾಕ್ಟರ್ ಆಫ್ ಫಿಲಾಸಪಿ
ಆಹಾರ ವಿಜ್ಞಾನ ಮತ್ತು ಪೋಷಣೆ 1991-92 ಡಾಕ್ಟರ್ ಆಫ್ ಫಿಲಾಸಪಿ
ಸಸ್ಯ ಜೀವ ತಂತ್ರಜ್ಞಾನ 2003-04 ಡಾಕ್ಟರ್ ಆಫ್ ಫಿಲಾಸಪಿ
ಅರಣ್ಯ ಮತ್ತು ಪರಿಸರ ವಿಜ್ಞಾನ 2014-15 ಡಾಕ್ಟರ್ ಆಫ್ ಫಿಲಾಸಪಿ
ಕೃಷಿ ವ್ಯವಹಾರ ನಿರ್ವಹಣೆ 2019-20 ಡಾಕ್ಟರ್ ಆಫ್ ಫಿಲಾಸಪಿ
 

ವೈಜ್ಞಾನಿಕ ಅಧಿಕಾರಿ

Dr. K. S. Nirmala
Professor & Scientific Officer
Directorate of Post Graduate Studies,
UAS, GKVK, Bengaluru - 560 065
+91-80-2333 0422(O)
+91-9480702910 (M)
This email address is being protected from spambots. You need JavaScript enabled to view it. / This email address is being protected from spambots. You need JavaScript enabled to view it.

Additional information