ಕುಲಸಚಿವರ ಸಂದೇಶ

ಒಂದು ಆದರ್ಶ ಶಿಕ್ಷಣ ಸಂಸ್ಥೆಯ ಉದ್ದೇಶವು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಉನ್ನತವಾದ ಅರಿವು ಮತ್ತು ತಿಳುವಳಿಕೆಗಳ ನೆಲೆಗಳಿಗೇರಿಸುವ ದಿಸೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ಪೂರೈಸುವುದಾಗಿರುತ್ತದೆ. ಈ ದಿಸೆಯಲ್ಲಿ ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಶೈಕ್ಷಣಿಕ ಸಂಸ್ಥೆಯಾದ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಕರ್ನಾಟಕದ ಕೃಷಿ ಅಭಿವೃದ್ಧಿಗೆ ವಿಸ್ತರಣಾ ಸೇವೆಯ ಮೂಲಕ ಉತ್ಪಾದಕ ಸಂಶೋಧನೆ ಮತ್ತು ಪರಿಣಾಮಕಾರಿ ತಂತ್ರಜ್ಞಾನಗಳ ಅಳವಡಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಕೃಷಿವಿಜ್ಞಾನ, ರೇಷ್ಮೆಕೃಷಿ, ಕೃಷಿ ಮಾರುಕಟ್ಟೆ ಹಾಗೂ ಸಹಾಕರ, ಕೃಷಿ ತಂತ್ರಜ್ಞಾನ, ಕೃಷಿ ಜೈವಿಕತಂತ್ರಜ್ಞಾನ ಹಾಗೂ ಆಹಾರ ತಂತ್ರಜ್ಞಾನದಂತಹ ಶಿಸ್ತುಗಳಲ್ಲಿ ಶಿಕ್ಷಣವನ್ನು ನೀಡುತ್ತದೆ. ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕೃಷಿ ವಿಜ್ಞಾನ ಶಿಕ್ಷಣ ಶಿಸ್ತಿನಲ್ಲಿ ಗುಣಾತ್ಮಕ ಉನ್ನತ ಶಿಕ್ಷಣ ಕೈಗೊಳ್ಳಲು ಅಪ್ರತಿಮ ಸಂಸ್ಥೆಯಾಗಿ ಹೊರಹೊಮ್ಮಿ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಿಂದ ಕೂಡ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.
ವಿಶ್ವವಿದ್ಯಾನಿಲಯವು ಅತ್ಯಾಧುನಿಕ ಪ್ರಯೋಗಾಲಯಗಳು, ವಿದ್ಯಾರ್ಥಿ ವಸತಿನಿಲಯಗಳು, ಆಟದ ಮೈದಾನÀ ಹಾಗೂ ಗ್ರಂಥಾಲಯವನ್ನು ಹೊಂದಿದೆ. ಇಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಸಾಹಿತ್ಯ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಗುರುತರ ಸಾಧನೆ ಮಾಡಿದ್ದಾರೆ. ವಿಶ್ವವಿದ್ಯಾನಿಲಯವು, ಭಾರತೀಯ ಕೃಷಿ ಅನುಸಂಧಾನ ಪರಿಷತ್‍ವತಿಯಿಂದ ನೀಡುವ ಸರ್ದಾರ್ ಪಾಟೀಲ್ ಅತ್ಯುತ್ತಮ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಂಸ್ಥೆ ಪ್ರಶಸ್ತಿಗೆ ಎರಡು ಸಾರಿ ಭಾಜನವಾಗಿದೆ. ವಿಶ್ವವಿದ್ಯಾನಿಲಯವು, ರಾಷ್ಟ್ರಮಟ್ಟದಲ್ಲಿ ನಡೆಯುವ ಜೆ.ಆರ್.ಎಫ್. ಹಾಗೂ ಎಸ್.ಆರ್.ಎಫ್. ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ಕಂಡಿದ್ದು ಸಸ್ಯವಿಜ್ಞಾನ ಹಾಗೂ ಕೃಷಿ ತಂತ್ರಜ್ಞಾನ ವಿಭಾಗಗಳಲ್ಲಿ ಉತ್ತೀರ್ಣರಾದವರ ಸಂಖ್ಯಾಬಲದ ಆಧಾರದ ಮೇಲೆ ಕ್ರಮವಾಗಿ 2018-19 ಹಾಗೂ 2019-20 ಶೈಕ್ಷಣಿಕ ವರ್ಷಗಳಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದೆ.
 ಯಾವುದೇ ಶಿಕ್ಷಣ ಸಂಸ್ಥೆಗೆ ವಿದ್ಯಾರ್ಥಿಗಳೇ ಆಸ್ತಿ. ಅಂತೆಯೇ ವಿದ್ಯಾರ್ಥಿಗಳನ್ನು ಗುಣಮಟ್ಟದ ಶಿಕ್ಷಣ ಮತ್ತು ಮೌಲ್ಯಗಳೊಂದಿಗೆ ಪರಿವರ್ತಿಸುವುದು ವಿಶ್ವವಿದ್ಯಾನಿಲಯದ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಇಷ್ಟಪಟ್ಟು ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಬೇಕೆ ವಿನಃ ಬಲವಂತದಿಂದಲ್ಲ. ಹಾಗೆಯೇ ಬೋಧಕರು ಸಹ ತಮ್ಮನ್ನು ನಿತ್ಯವೂ ಉನ್ನತೀಕರಿಸಿಕೊಳ್ಳುತ್ತಾ ಗುಣಮಟ್ಟದ ಶಿಕ್ಷಣ ಸೇವೆಗೆ ಬದ್ಧರಾಗಿರಬೇಕು. ಹೀಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಟ್ಟಾಗಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಶ್ರೇಷ್ಠಗೊಳಿಸÀಬಹುದಾಗಿದೆ.
 ವೈವಿಧ್ಯಮಯ ಸಂಸ್ಕøತಿ ಹಾಗೂ ಧರ್ಮಗಳ ಉಪಸ್ಥಿತಿಯ ನಡುವೆ ಸಮಾಜದಲ್ಲಿ ಸಾಮರಸ್ಯದಿಂದ ಜೀವನ ನಡೆಸುವ ಮನೋಸ್ಥಿತಿಯನ್ನು ಕಲಿಕಾರ್ಥಿಗಳಲ್ಲಿ ಒಡಮೂಡಿಸುವುದು ಅತ್ಯಂತ ಮುಖ್ಯವಾದದ್ದಾಗಿದೆ. ಹಲವಾರು ಸಂದರ್ಭಗಳಲ್ಲಿ ಯುವಜನತೆಯು ವಾಸ್ತವತೆಯನ್ನು ಅರ್ಥೈಸಿಕೊಳ್ಳುವಲ್ಲಿ ಸೋಲಲು ಕಾರಣವಾದ ಮನೋಸ್ಥಿತಿಯ ಅಸಮತೋಲನಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕ್ರಾಂತಿಯು ಕಾರಣವಾಗಿದೆ. ಆಗಾಗ, ದುಷ್ಟ ಮನಸ್ಸುಗಳು ಮಾಹಿತಿಯ ತಪ್ಪಾದ ವ್ಯಾಖ್ಯಾನದ ಮೂಲಕ ಆಘಾತಗಳನ್ನು ಸೃಷ್ಟಿಸುತ್ತಾರೆ. ಹಾಗಾಗಿ, ಕೇವಲ ಶಿಕ್ಷಣ ತಜ್ಞರಲ್ಲಷ್ಟೆ ಅಲ್ಲದೆ ಯುವಕರಲ್ಲಿಯು ಮೌಲ್ಯಗಳನ್ನು ಬೆಳೆಸುವುದು ಉನ್ನತ ಶಿಕ್ಷಣದ ಭಾಗವಾಗುವುದು ಒಳಿತು.
 ಕೇವಲ ಅತ್ಯುನ್ನತ ಶೇಕಡಾವಾರು ಉತ್ತೀರ್ಣದ ಫಲಿತಾಂಶವನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳನ್ನು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳೆಂದು ಪರಿಗಣಿಸುವ ಅಗತ್ಯವಿಲ್ಲ. ಉದ್ಯೋಗ ಕ್ಷೇತ್ರಕ್ಕೆ ಸನ್ನದ್ಧವಾಗಿರುವ ಗುಣಮಟ್ಟದ ಸಮರ್ಥ ಪದವೀಧರರು ಬಹಳ ಮುಖ್ಯ ಆದ್ದರಿಂದ ವರ್ತಮಾನದ ಅವಶ್ಯಕತೆಗನುಗುಣವಾದ ವಿವಿಧ ಕೌಶಲ್ಯ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಉತ್ತಮ ಶಿಕ್ಷಣ ಸಂಸ್ಥೆಗಳ ಮುಖ್ಯ ಧ್ಯೇಯೋದ್ದೇಶವಾಗಿರಬೇಕು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣವನ್ನು ಪೂರೈಸುತ್ತಿರುವ ವಿದ್ಯಾರ್ಥಿಗಳೆಲ್ಲರಿಗೂ ನನ್ನ ಶುಭಾಶಯಗಳು. ಅವರು ನಿರೀಕ್ಷಿಸಿದ ಸ್ಥಾನಮಾನಗಳನ್ನು ಪಡೆದು, ರಾಜ್ಯ ಮತ್ತು ದೇಶದ ಕೃಷಿ ಸಮುದಾಯದ ಪ್ರಗತಿಗಾಗಿ ತಮ್ಮ ಸೇವೆಯನ್ನು ಮುಡಿಪಾಗಿಡಬೇಕೆಂದು ಆಶಿಸುತ್ತೇನೆ.  
 
 
 

Additional information