ವಿದ್ಯುನ್ಮಾನ ಸಂಪನ್ಮೂಲಗಳು

ವಿಶ್ವವಿದ್ಯಾನಿಲಯ ಗ್ರಂಥಾಲಯವು ಹಲವಾರು ಆನ್ ಲೈನ್ ಪತ್ರಿಕೆಗಳು, ಆಫ್ ಲೈನ್ ಡೇಟಾಬೇಸ್ ಗಳು, ಇ-ಪುಸ್ತಕಗಳು ಮತ್ತು ಇ-ಪತ್ರಿಕೆಗಳಿಗೆ ಚಂದಾದಾರರಾಗಿದೆ.

ಇದರ ಜೊತೆಗೆ ಎನ್.ಎ.ಐ.ಪಿ. ಕಾರ್ಯಕ್ರಮದಡಿಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೃಷಿ ಮತ್ತು ಸಂಬಂಧಿತ ವಿಷಯಗಳ 5000+ ಪೂರ್ಣ ಪಠ್ಯ ಪತ್ರಿಕೆಗಳ ಲಭ್ಯತೆಯನ್ನು ಒದಗಿಸುತ್ತಿದೆ.
ಆನ್ ಲೈನ್ ಸಂಪನ್ಮೂಲಗಳು
  • ವರ್ಲ್ಡ್ ಕ್ಯಾಟ್

    ಗ್ರಂಥಾಲಯ ಸಂಪನ್ಮೂಲ ಮತ್ತು ಸೇವೆಗಳ ಜಗತ್ತಿನ ಅತಿ ದೊಡ್ಡ ಜಾಲ ವರ್ಲ್ಡ್ ಕ್ಯಾಟ್ ಆಗಿದೆ. ಬಹಳಷ್ಟು ಜನ ಅಂತರ್ಜಾಲದಲ್ಲಿ ಮಾಹಿತಿಯನ್ನು ಅರಸುವುದರಿಂದ ವರ್ಲ್ಡ್ ಕ್ಯಾಟ್ ಗ್ರಂಥಾಲಯಗಳು ತಮ್ಮ ಸಂಪನ್ಮೂಲಗಳಿಗೆ ವೆಬ್ ನಲ್ಲಿ ಲಭ್ಯತೆ ಒದಗಿಸುವುದಕ್ಕೆ ಮುಡಿಪಾಗಿವೆ. ವರ್ಲ್ಡ್ ಕ್ಯಾಟ್ ಜಗತ್ತಿನಾದ್ಯಂತ ಇರುವ 10,000ಕ್ಕೂ ಹೆಚ್ಚಿನ ಗ್ರಂಥಾಲಯಗಳ ಸಂಗ್ರಹಗಳು ಮತ್ತು ಸೇವೆಗಳಿಗೆ ನಿಮ್ಮ ಸಂಪರ್ಕ ಕಲ್ಪಿಸುತ್ತದೆ.

  • AgriCat @ e-Granth

    "ಅಗ್ರಿಕ್ಯಾಟ್" ಎನ್ನುವುದು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಂಸ್ಥೆಗಳ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಕೃಷಿ ವಿಶ್ವವಿದ್ಯಾನಿಲಯ, ಜಿ.ಬಿ.ಪಂತ್ ಕೃಷಿ ತಂತ್ರಜ್ಞಾನ ವಿಶ್ವವಿದ್ಯಾನಿಲಯ, ಸಿ.ಸಿ.ಎಸ್ಎಚ್.ಎ.ಯು., ಎ.ಎನ್.ಜಿ.ಆರ್.ಎ.ಯು., ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಸಿ.ಐ.ಎಫ್.ಇ., ಸಿ.ಎಸ್.ಕೆ.ಎಚ್.,ಪಿ.ಕೆ.ವಿ., ಎಂ.ಪಿ.ಕೆ.ವಿ., ತನು ವಿ.ಎ.ಎಸ್., ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೇಂದ್ರ ಕಚೇರಿ -ಡ.ಕೆ.ಎಂ.ಎ.) ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ 12 ಪ್ರಮುಖ ಗ್ರಂಥಾಲಯಗಳ ಕ್ಯಾಟಲಾಗ್ ಒಕ್ಕೂಟವಾಗಿದೆ.

  • krishikosh.egranth.ac.in

    ಇದು ಕೃಷಿ ಸಂಶೋಧನಾ ಸಂಸ್ಥೆಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡ ರಾಷ್ಟ್ರೀಯ ಕೃಷಿ ಸಂಶೋಧನೆ ವ್ಯವಸ್ಥೆಯು ವಿವಿಧ ಗ್ರಂಥಾಲಯ ಸಂಪನ್ಮೂಲಗಳಿಗೆ ಡಿಜಿಟಲ್ ಲಭ್ಯತೆಯನ್ನು ಒದಗಿಸುತ್ತದೆ. ಇದರಲ್ಲಿಯೇ "ಕೃಷಿಕೋಶ"ವೆಂಬ ಡಿಜಿಟಲ್ ಭಂಡಾರವೂ ಸಹ ಇದೆ.  

  • IDEAL

    "ಐಡಿಯಲ್" (IDEAL - ಕೃಷಿ ಗ್ರಂಥಾಲಯಗಳ ಭಾರತೀಯ ಡಿಜಿಟಲ್ ಒಕ್ಕೂಟ) ಅನ್ನು ವಿಜ್ಞಾನಿ, ಸಂಶೋಧಕರ, ಅಧ್ಯಾಪಕ ಮತ್ತು ವಿಸ್ತರಣೆ ಸಮುದಾಯದ ಹೆಚ್ಚುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ಗ್ರಂಥಾಲಯ ಸಂಪನ್ಮೂಲಗಳನ್ನು ಸಂಗ್ರಹಿಸಿ, ಡಿಜಿಟೈಸ್ ಮಾಡಿ ಆನ್ ಲೈನ್ ನಲ್ಲಿ ಹಂಚಿಕೊಳ್ಳಲು ಅಭಿವೃದ್ಧಿಪಡಿಸಲಾಗಿದೆ.

  • ಆನ್-ಲೈನ್ ಸಾರ್ವಜನಿಕ ಕ್ಯಾಟಲಾಗ್ ಲಭ್ಯತೆ -1 (OPAC)

    ಅಥವಾ

  • ಆನ್-ಲೈನ್ ಸಾರ್ವಜನಿಕ ಕ್ಯಾಟಲಾಗ್ ಲಭ್ಯತೆ - 2

    ಗ್ರಂಥಾಲಯವು ಪುಸ್ತಕಗಳ, ಪತ್ರಿಕೆಗಳ, ಮಹಾಪ್ರಬಂಧಗಳ, ವರದಿಗಳ ಮತ್ತು ಪರಾಮರ್ಶನ ಸಂಪನ್ಮೂಲಗಳ ಡೇಟಾಬೇಸ್ ಸಿದ್ಧಪಡಿಸಿದ್ದು ಅವು ಗ್ರಂಥಾಲಯದಲ್ಲಿ ಲಭ್ಯವಿವೆ. ಬಳಕೆದಾರರು ಅಂತರ್ಜಾಲದ ಮೂಲಕ ಕೆ.ಓ.ಎಚ್.ಎ. ಎಲ್.ಎಂ.ಎಸ್. ಬಳಸಿ ಆನ್-ಲೈನ್ ಸಾರ್ವಜನಿಕ ಕ್ಯಾಟಲಾಗ್ ಗೆ ಪ್ರವೇಶ ಪಡೆಯಬಹುದು.

     

  • ಸಂಖ್ಯಾ ದತ್ತಾಂಶ ಪಡೆಯಲು ಇಂಡಿಯಾಅಗ್ರಿಸ್ಟ್ಯಾಟ್

    ಅದು ಭಾರತದ ಮತ್ತು ಅದರ ರಾಜ್ಯಗಳ, ಪ್ರದೇಶ ಮತ್ತು ಕ್ಷೇತ್ರಗಳ ಕೃಷಿಯ ಸಾಮಾಜಿಕ-ಆರ್ಥಿಕ ಅಂಕಿಅಂಶಗಳ ಮಾಹಿತಿಯನ್ನು ಒದಗಿಸುತ್ತದೆ.

     

ಕ್ಯಾಂಪಸ್ ವಾರು ಲಭ್ಯತೆ
ಇ-ಪುಸ್ತಕಗಳು

ಇ-ಬುಕ್ ಪಟ್ಟಿ

ಆನ್ ಲೈನ್ ಪತ್ರಿಕೆಗಳು
ಆವರಣೇತರ ಲಭ್ಯತೆ

Additional information