ತೃಣಧಾನ್ಯ

ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರ
ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದವರು ಒಟ್ಟು ರೂ. 124 ಲಕ್ಷಗಳ ಆಯವ್ಯಯದೊಂದಿಗೆ 2012-17ರಿಂದ ಪ್ರಾರಂಬಿಸಿತು. ಪ್ರಾರಂಭದಲ್ಲಿ ಇದನ್ನು ಐ.ಎನ್.ಎಸ್.ಐ.ಎಂ.ಪಿ. (2012-14) ಅಡಿಯಲ್ಲಿ ನಂತರ ಎನ್.ಎಫ್.ಎಸ್.ಎಂ. ಕಾರ್ಯಕ್ರಮಗಳಡಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯಕ ಸಂಸ್ಕರಣ ಸಮಸ್ಯೆಗಳ ಪರಿಹಾರ ಒದಗಿಸುವ, ಉದ್ಯಮಶೀಲತೆ ಅಭಿವೃದ್ಧಿ ಮತ್ತು ತರಬೇತಿ, ತಂತ್ರಜ್ಞಾನದ ಸುಧಾರಣೆ, ರೆಟ್ರೊಫಿಟಿಂಗ್ ಮತ್ತು ಪ್ರಾತ್ಯಕ್ಷಿಕೆ, ಉತ್ಪನ್ನ ಅಭಿವೃದ್ಧಿ ಮತ್ತು ಸಂಸ್ಕರಣಕಾರರು ಹಾಗೂ ಉತ್ಪಾದಕರ ನಡುವೆ ಸಂಪರ್ಕ ಏರ್ಪಡಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ.
ಈ ಪ್ರಾಯೋಜನೆಯಡಿಯಲ್ಲಿ:
  • 18 ಪ್ರಾಥಮಿಕ ಮತ್ತು ದ್ವಿತೀಯಕ ಸಂಸ್ಕರಣ ಯಂತ್ರಗಳನ್ನು ತೃಣಧಾನ್ಯಗಳ ಸಂಸ್ಕರಣೆಗೆ ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.
  • ರೈತರಿಗೆ, ರೈತ ಮಹಿಳೆಯರಿಗೆ ಮತ್ತು ಉದ್ಯಮ ಶೀಲರಿಗೆ 17 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಭಾಗವಹಿಸಿದವರಲ್ಲಿ ಶೇ. 21ರಷ್ಟು ಮಹಿಳೆಯರೇ ಆಗಿದ್ದಾರೆ.
  • 21 ಜಿಲ್ಲೆಗಳ 58 ತಾಲ್ಲೂಕುಗಳ ಸುಮಾರು 200 ಗ್ರಾಮಗಳ 450 ರೈತರಿಗೆ ತರಬೇತಿಯ ಮೂಲಕ ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವು ತೃಣಧಾನ್ಯಗಳ ಬೇಸಾಯ, ಬಳಕೆ ಮತ್ತು ಮೌಲ್ಯವರ್ಧನೆ ಕುರಿತಂತೆ ಸಂವೇದನಾಶೀಲರನ್ನಾಗಿಸಿದೆ.
  • ತೃಣಧಾನ್ಯಗಳ ಬಗೆಗಿನ ಮಾಹಿತಿಗಾಗಿ 660ಕ್ಕೂ ಹೆಚ್ಚು ಜನ ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.
  • ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವು 45ಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ಮತ್ತು ಖಾದ್ಯಗಳನ್ನು ಅಭಿವೃದ್ಧಿಪಡಿಸಲಾಗಿದ್ದು ವಿಶ್ವವಿದ್ಯಾನಿಲಯವು ತನ್ನ ತಂತ್ರಜ್ಞಾನ ವಾಣಿಜ್ಯೀಕರಣ ಘಟಕದ ಮೂಲಕ ಅವುಗಳಲ್ಲಿ 17 ನ್ನು ವಾಣಿಜ್ಯೀಕರಣಗೊಳಿಸುವ ಹಂತದಲ್ಲಿದೆ
  • ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವು ಎರಡು ತೃಣಧಾನ್ಯ ರೆಸ್ಟಾರೆಂಟ್ ಗಳನ್ನು ಮತ್ತು ಒಂದು ಆನ್ ಲೈನ್ ತೃಣಧಾನ್ಯ ಮಳಿಗೆಯ ಸ್ಥಾಪನೆಗೆ ಸಹಾಯ ಮಾಡಿದೆ.
  • ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವನ್ನು ಇನ್ ಕ್ಯುಬೇಶನ್ ಕೇಂದ್ರದಂತೆ ನಡೆಸುತ್ತಿದ್ದು ಪಾಲುದಾರರ ಬಳಕೆಗೆ ಲಭ್ಯವಾಗುವಂತೆ ಸಂಸ್ಕರಣ ಸೌಲಭ್ಯವಿದ್ದು ಈಗಾಗಲೇ 4 ಟನ್ ಗಳಷ್ಟು ಐದು ತೃಣಧಾನ್ಯಗಳನ್ನು ಸಂಸ್ಕರಿಸಲಾಗಿದೆ ಹಾಗೂ ಆದಾಯವನ್ನು ಸಹ ಗಳಿಸಲಾಗಿದೆ.
ಹಾಗಾಗಿ, ತೃಣಧಾನ್ಯಗಳ ಅತ್ಯುತ್ಕೃಷ್ಟತಾ ಕೇಂದ್ರವು ರಾಜ್ಯದ ರೈತ ಸಮುದಾಯದಲ್ಲಿ, ಉದ್ಯಮ ಸಾಹಸಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಅದು ರಾಜ್ಯದಲ್ಲಿನ ತೃಣಧಾನ್ಯ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ಮೂಲಭೂತ ಸೌಕರ್ಯ ದೇಶದಲ್ಲೇ ಅತ್ಯುತ್ತಮವಾದುದು

Additional information